ನರೇಂದ್ರ ಮೋದಿಯನ್ನ ಟ್ವಿಟ್ಟರ್ ನಲ್ಲಿ ಟ್ರೊಲ್ ಮಾಡಿದ ಯುವ ಕಾಂಗ್ರೆಸ್ ಮುಖಂಡ | Oneindia Kannada

2017-12-09 1,315

Prime Minister Narendra Modi on Saturday took on Salman Nizami, a youth Congress leader, over his tweet where he questioned the family background of the prime minister. Prime Minister Modi, while addressing a public rally in Gujarat's Lunawada, said, "I want to tell all Congress leaders who are abusing me, mocking my poor family, asking who my parents are. This nation is my everything. Every moment of my time is devoted to India and 125 crore Indians,"

ಮಣಿಶಂಕರ್ ಅಯ್ಯರ್ ರಿಂದ 'ನೀಚ' ಎಂಬ ಪದಪ್ರಯೋಗವಾಗಿ ನಾಲ್ಕು ದಿನ ಕಳೆದಿಲ್ಲ, ಆದರೆ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕಾಂಗ್ರೆಸ್ ಮುಖಂಡರೊಬ್ಬರು ಅವಾಚ್ಯ ಭಾಷೆಯಿಂದ ಮಾತನಾಡಿ ಸುದ್ದಿಯಾಗಿದ್ದಾರೆ. ಸಲ್ಮಾನ್ ನಿಜಾಮಿ ಎಂಬ ಕಾಂಗ್ರೆಸ್ಸಿಗ, ನಿಮ್ಮ ತಂದೆ ಯಾರು ಎಂದು ಪ್ರಶ್ನಿಸಿ ಮೋದಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ತಂದೆ-ತಾತ, ಮತ್ತವರ ಹಿನ್ನೆಲೆ ಕುರಿತು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದ ಅವರಿಗೆ ಗುಜರಾತಿನ ಲುನವಾಡದಲ್ಲಿ, ಮೋದಿ ತಿರುಗೇಟು ಸಹ ನೀಡಿದ್ದಾರೆ."ನನ್ನನ್ನು ಪದೇ ಪದೇ ಹಿಯಾಳಿಸುವ, ನನ್ನ ಬಡ ಕುಟುಂಬವನ್ನು ಅಣಕಿಸುವ, ನನ್ನ ಪಾಲಕರು ಯಾರೆಂದು ಕೇಳುವ ಎಲ್ಲ ಕಾಂಗ್ರೆಸ್ ನಾಯಕರಿಗೂ ನಾನೊಂದು ಮಾತನ್ನು ಹೇಳುತ್ತೇನೆ, ನನಗೆ ಈ ದೇಶವೇ ಎಲ್ಲ, ಅದೇ ನನ್ನ ಕುಟುಂಬ. ನನ್ನ ಬದುಕಿನ ಪ್ರತಿ ಘಳಿಗೆಯೂ ಈ ದೇಶಕ್ಕೆ ಮತ್ತು ದೇಶದ 125 ಕೋಟಿ ಜನರಿಗೆ ಸಮರ್ಪಣೆಯಾಗಿದೆ" ಎಂದು ಮೋದಿ ಹೇಳಿದ್ದಾರೆ."